ಜೀವನ ನಾಟಕ ಚಿತ್ರವು ೧೯೪೨ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಮಹಬ್ ಕಾಶ್ಮೀರಿರವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ನಿರ್ಮಿಸಿದ್ದಾರೆ."ಈ ಚಿತ್ರದಲ್ಲಿ ವೀರಣ್ಣ ಕೆಂಪರಾಜ್ ನಾಯಕನ ಪಾತ್ರದಲ್ಲಿ ಮತ್ತು ಜಯಮ್ಮ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಮಯ್ಯರ್ ಮತ್ತು ಹಾರ್ಮೋನಿಯಂ ಶೇಷಗಿರಿರಾವ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. == ಕಥಾ ಸಾರಾಂಶ == ಆನಂದ್‌, ನಾಟಕ ಕಂಪೆನಿಯ ಮಾಲಿಕ. ಈತ ಪದ್ಮ ಎಂಬ ಅನಾಥ ಯುವತಿ ಕಂಠಕ್ಕೆ ಮಾರು ಹೋಗಿ ಆಕೆಯನ್ನು ದತ್ತು ತೆಗೆದುಕೊಂಡು ಶಿಕ್ಷಣ ಕೊಡಿಸುತ್ತಾನೆ.ನಾಟಕಗಳಲ್ಲಿ ಅವಕಾಶ ಕೊಡುತ್ತಾನೆ.ಅದೇ ನಾಟಕ ಕಂಪೆನಿಯ ಮೋಹನ್‌ ಪದ್ಮಳನ್ನು ಇಷ್ಟ ಪಡುತ್ತಾನೆ. ನಾಯಕಿ ಪಾತ್ರ ಮಾಡುತ್ತಿದ್ದ ಕಮಲ ಇದನ್ನು ಸಹಿಸದೇ ನಾಟಕ ಕಂಪೆನಿ ಬಿಟ್ಟು ಹೋಗುತ್ತಾಳೆ. ಇದರಿಂದ ಕೋಪಗೊಂಡ ಆನಂದ್‌, ಮೋಹನ್‌ ಹಾಗೂ ಪದ್ಮಾಳನ್ನು ಕಂಪೆನಿಯಿಂದ ಹೊರಹಾಕುತ್ತಾನೆ. ಕಮಲ, ಮೋಹನ್‌ ಮತ್ತು ಪದ್ಮಳನ್ನು ಬೇರೆ ಮಾಡುತ್ತಾಳೆ. ನಂತರ ಹಲವು ತಿರುವುಗಳ ಬಳಿಕ ಅವರಿಬ್ಬರೂ ಒಂದಾಗುತ್ತಾರೆ. == ವಿಶೇಷತೆ == ಅ.ನ.ಕೃಷ್ಣ ರಾಯರು ಚಿತ್ರಕತೆ,ಸಂಭಾಷಣೆ ರಚಿಸಿದ ಮೊದಲ ಚಲನಚಿತ್ರವಾಗಿದೆ. ಕೆಂಪರಾಜ ಅರಸ್‌ ಅವರು ಈ ಚಿತ್ರದ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದರು. ಕನ್ನಂಬಾಡಿ ಹಾಗೂ ಬೃಂದಾವನದಲ್ಲಿ ಚಿತ್ರಿಕರಣ ನಡೆಸಿ, ಹೊರಾಂಗಣದಲ್ಲಿ ಚಿತ್ರಿತವಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾ.ರಾಜಕುಮಾರ್‌ ಅವರ ತಂದೆ ರಂಗಭೂಮಿ ನಟ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅಭಿನಯಿಸಿದ ಏಕೈಕ ಚಲನಚಿತ್ರವಾಗಿದೆ. == ಪಾತ್ರ ವರ್ಗ == ವೀರಣ್ಣ ಕೆಂಪರಾಜ್ ಅರಸ್ ಜಯಮ್ಮ ಶಾಂತಾ ಹುಬ್ಳೀಕರ್ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಬಸವರಾಜಪ್ಪ ಮೋಹನ ಕುಮಾರಿ ಮೂರಡಿ ಕುಳ್ಳ ಎಂಟಡಿ ಲಂಬು ರಾಜಮ್ಮ ಸುಂದರಮ್ಮ ಕಮಲಮ್ಮ ಶಾರದಮ್ಮ ಬೇಬಿ ವಿಜಯ ಮರಿ ರಾವ್‌ ಮಹಾಬಲ ರಾವ್ == ನಿರ್ಮಾಣ ಮತ್ತು ಬಿಡುಗಡೆ == ಸೆಂಟ್ರಲ್ ಸ್ಟೂಡಿಯೋ, ಕೊಯಮತ್ತೂರಿನಲ್ಲಿ ತಯಾರಾದ ಈ ಚಿತ್ರ, ಕಲ್ಕತ್ತಾ ಥಿಯೇಟರ್ ಗ್ರೂಪ್‍ನ ವಹಾಬ್ ಕಾಶ್ಮೀರಿಯವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರವಾಗಿದೆ. ೧೬೦ ನಿಮಿಷಗಳ ಅವಧಿಯ "ಜೀವನ ನಾಟಕ" ಚಿತ್ರವು ಜನವರಿ ೧,೧೯೪೩ರಲ್ಲಿ ಬಿಡುಗಡೆಯಾಯಿತು. ಅಂದಿನ "ಇಂಡಿಯನ್ ಎಕ್ಸ್ಪ್ರೆಸ್" ಪತ್ರಿಕೆಯ ವಿಮರ್ಶೆಯು "ಗುಬ್ಬಿ ವೀರಣ್ಣನವರ ಅಧ್ಬುತ ಹಾಸ್ಯ ಹಾಗೂ ಜಯಮ್ಮ ಮತ್ತು ಶಾಂತಾ ಹುಬ್ಳಿಕರ್ ಅವರ ನಟನೆ ಜನರ ಮನ ಸೆಳೆಯಿತು. ಇದರೊಂದಿಗೆ ಚಿತ್ರದ ಸಂಗೀತವೂ ಜನರು ಇಷ್ಟ ಪಡುವಂತಿದೆ" ಎಂದಿದೆ. ಗುಬ್ಬಿ ವೀರಣ್ಣನವರು ಸ್ವತಂತ್ರವಾಗಿ ನಿರ್ಮಿಸಿದ ಮೊದಲ ವಾಕ್ಚಿತ್ರ ಇದಾಗಿದೆ. == ಉಲ್ಲೇಖ ==